ಆರಂಭಿಕ ಸ್ತನ ಕ್ಯಾನ್ಸರ್‌ನಲ್ಲಿ ಮುಂದಿನ ಪೀಳಿಗೆಯ ಎಂಡೋಕ್ರೈನ್ ಥೆರಪಿಯತ್ತ ಕೆಲಸ ಮಾಡುವುದು
ಆರಂಭಿಕ ಸ್ತನ ಕ್ಯಾನ್ಸರ್ ಹೊಂದಿರುವ ಅನೇಕ ಜನರು ತಮ್ಮ ಕ್ಯಾನ್ಸರ್ ಮರಳಿ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಹಾರ್ಮೋನ್ ಚಿಕಿತ್ಸೆಯನ್ನು (ಎಂಡೋಕ್ರೈನ್ ಥೆರಪಿ ಎಂದೂ ಕರೆಯಲಾಗುತ್ತದೆ) ನೀಡಲಾಗುತ್ತದೆ. CAMBRIA-2 ಅಧ್ಯಯನವು ಪರಿಶೋಧನಾತ್ಮಕ ಔಷಧೋಪಚಾರಗಳನ್ನು ಪ್ರಸ್ತುತ ಗುಣಮಟ್ಟದ ಆರೈಕೆ ಆಯ್ಕೆಗಳಿಗೆ ಹೋಲಿಸುವ ಮೂಲಕ ಪರ್ಯಾಯ ಹಾರ್ಮೋನ್ ಚಿಕಿತ್ಸೆಯ ಆಯ್ಕೆಯನ್ನು ನೋಡುತ್ತಿದೆ. CAMBRIA-2 ಅಧ್ಯಯನಕ್ಕೆ AstraZeneca ಧನಸಹಾಯ ನೀಡಿದೆ.
ಸ್ತನ ಕ್ಯಾನ್ಸರ್ ಬಗ್ಗೆ
ಸ್ತನ ಕ್ಯಾನ್ಸರ್ ಎಂಬುದು ಸ್ತನದಲ್ಲಿನ ಜೀವಕೋಶಗಳು ನಿಯಂತ್ರಣವನ್ನು ಮೀರಿ ಬೆಳೆಯುವ ಒಂದು ರೋಗವಾಗಿದೆ. ವಿವಿಧ ರೀತಿಯ ಸ್ತನ ಕ್ಯಾನ್ಸರ್‌ಗಳಿವೆ. CAMBRIA-2 ಅಧ್ಯಯನವು ER+/HER2- ಆರಂಭಿಕ ಸ್ತನ ಕ್ಯಾನ್ಸರ್ ಹೊಂದಿರುವ ಜನರನ್ನು ಹುಡುಕುತ್ತಿದೆ. ಆರಂಭಿಕ ಸ್ತನ ಕ್ಯಾನ್ಸರ್ ಹೊಂದಿರುವ ಅನೇಕ ಜನರು ತಮ್ಮ ಕ್ಯಾನ್ಸರ್ ಮರಳಿ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಹಾರ್ಮೋನ್ ಚಿಕಿತ್ಸೆಯನ್ನು (ಎಂಡೋಕ್ರೈನ್ ಥೆರಪಿ ಎಂದೂ ಕರೆಯಲಾಗುತ್ತದೆ) ನೀಡಲಾಗುತ್ತದೆ.
CAMBRIA-2 ಅಧ್ಯಯನವು ಪರಿಶೋಧನಾತ್ಮಕ ಔಷಧೋಪಚಾರಗಳನ್ನು ಪ್ರಸ್ತುತ ಗುಣಮಟ್ಟದ ಆರೈಕೆ ಆಯ್ಕೆಗಳಿಗೆ ಹೋಲಿಸುವ ಮೂಲಕ ಪರ್ಯಾಯ ಹಾರ್ಮೋನ್ ಚಿಕಿತ್ಸೆಯ ಆಯ್ಕೆಯನ್ನು ನೋಡುತ್ತಿದೆ. ಆರಂಭಿಕ ಸ್ತನ ಕ್ಯಾನ್ಸರ್ ಎಂದರೆ ಗೆಡ್ಡೆಯು ಸ್ತನ ಮತ್ತು ಸುತ್ತಮುತ್ತಲಿನ ದುಗ್ಧರಸ ಗ್ರಂಥಿಗಳಿಗೆ ಸೀಮಿತವಾಗಿರುತ್ತದೆ. ಇದು ದೇಹದ ಇತರ ಭಾಗಗಳಿಗೆ ಹರಡಿರುವುದಿಲ್ಲ.
ER+/HER2- ಸ್ತನ ಕ್ಯಾನ್ಸರ್ ಸ್ತನ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ವಿಧವಾಗಿದೆ; ಇದು ಈಸ್ಟ್ರೊಜೆನ್ ಗ್ರಾಹಿಗಳನ್ನು (ER +) ಅತಿಯಾಗಿ ವ್ಯಕ್ತಪಡಿಸುತ್ತದೆ ಆದರೆ HER2 ಗ್ರಾಹಕವನ್ನಲ್ಲ (HER2-).
CAMBRIA-2 ಅಧ್ಯಯನದ ಬಗ್ಗೆ
CAMBRIA-2 ನಂತಹ ಸಂಶೋಧನಾ ಅಧ್ಯಯನಗಳಲ್ಲಿ ಬಳಸುವುದನ್ನು ಹೊರತುಪಡಿಸಿ, ಪ್ರಸ್ತುತ ಯಾವುದೇ ಆರೋಗ್ಯ ಪ್ರಾಧಿಕಾರದಿಂದ ಅನುಮೋದಿಸದ ಪರಿಶೋಧನಾತ್ಮಕ ಔಷಧೋಪಚಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದು ಈ ಅಧ್ಯಯನದ ಗುರಿಯಾಗಿದೆ.
ಪ್ರಸ್ತುತ ಪ್ರಮಾಣಿತ ಹಾರ್ಮೋನ್ ಚಿಕಿತ್ಸೆಗಿಂತ ಪರಿಶೋಧನಾತ್ಮಕ ಔಷಧೋಪಚಾರವನ್ನು ಬಳಸಿಕೊಂಡು ಎಂಡೋಕ್ರೈನ್ ಥೆರಪಿಯು ಕ್ಯಾನ್ಸರ್ ಪುನರಾವರ್ತನೆಯನ್ನು (ಮರಳಿ ಬರುವ ಕ್ಯಾನ್ಸರ್) ತಡೆಗಟ್ಟುವಲ್ಲಿ ಉತ್ತಮವಾಗಿದೆಯೇ ಎಂದು ನೋಡಲು ನಾವು ಬಯಸುತ್ತೇವೆ. ಒಟ್ಟಾರೆಯಾಗಿ ಸ್ತನ ಕ್ಯಾನ್ಸರ್ ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಾವು ಬಯಸುತ್ತೇವೆ.
ಭಾಗವಹಿಸಲು ಯಾರು ಅರ್ಹರು?
ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.
ಸ್ಥಾನಾಂತರಗೊಳ್ಳದ ER+/HER2- ಆರಂಭಿಕ ಸ್ತನ ಕ್ಯಾನ್ಸರ್ ರೋಗನಿರ್ಣಯವನ್ನು ಹೊಂದಿರಬೇಕು (ಹಂತ I ರಿಂದ III).
12 ತಿಂಗಳೊಳಗೆ ಗೆಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿರಬೇಕು.
ಕೊನೆಯ ನಿಯೋ ಸಹಾಯಕ ಕೀಮೋಥೆರಪಿ/ರೇಡಿಯೋಥೆರಪಿ ಚಿಕಿತ್ಸೆಯ 12 ವಾರಗಳ ಒಳಗೆ ಇರಬೇಕು (ಅನ್ವಯವಾದರೆ).
ಹಾರ್ಮೋನ್ ಚಿಕಿತ್ಸೆಯನ್ನು ಪ್ರಾರಂಭಿಸಿದ 12 ವಾರಗಳ ಒಳಗೆ ಇರಬೇಕು ಅಥವಾ ಯಾವುದೇ ಹಾರ್ಮೋನ್ ಚಿಕಿತ್ಸೆಯನ್ನು ಪಡೆದಿರಬಾರದು.
ಅಧ್ಯಯನ-ಅಗತ್ಯವಿರುವ ಎಲ್ಲ ಭೇಟಿಗಳು, ಪರೀಕ್ಷೆಗಳು ಮತ್ತು ಔಷಧೋಪಚಾರಗಳನ್ನು ನಿಮಗೆ ಯಾವುದೇ ವೆಚ್ಚವಿಲ್ಲದೆ ಒದಗಿಸಲಾಗುತ್ತದೆ. ಇದಲ್ಲದೆ, ಅಧ್ಯಯನ-ಅಗತ್ಯವಿರುವ ಪ್ರಯಾಣಕ್ಕಾಗಿ ಮರುಪಾವತಿ ಲಭ್ಯವಿರಬಹುದು.
ಅಧ್ಯಯನದ ಸಾರಾಂಶ
ವೈದ್ಯಕೀಯ ಸ್ಥಿತಿ
ER+/HER2- ಆರಂಭಿಕ ಸ್ತನ ಕ್ಯಾನ್ಸರ್.
ಅಧ್ಯಯನದ ಅವಧಿ
ಸರಿಸುಮಾರು 10-14 ವರ್ಷಗಳು 7 ವರ್ಷಗಳವರೆಗೆ ಚಿಕಿತ್ಸೆಯೊಂದಿಗೆ ಮತ್ತು ನಂತರ ಕೊನೆಯ ವ್ಯಕ್ತಿಯು ಅಧ್ಯಯನವನ್ನು ಪ್ರವೇಶಿಸಿದ ನಂತರ 10 ವರ್ಷಗಳವರೆಗೆ ಪ್ರತಿ ವರ್ಷ ಅನುಸರಣೆ ಮಾಡಲಾಗುತ್ತದೆ.
ಅಧ್ಯಯನ ಸ್ಥಳಗಳು
ಇದು ಜಾಗತಿಕ ಅಧ್ಯಯನವಾಗಿದ್ದು, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಯುರೋಪ್, ಏಷ್ಯಾ-ಪೆಸಿಫಿಕ್ ಮತ್ತು ಆಸ್ಟ್ರೇಲಿಯಾದಲ್ಲಿ ಭಾಗವಹಿಸುವವರನ್ನು ನೋಂದಾಯಿಸುತ್ತದೆ.
ಇದು ಹಂತ 3 ಅಧ್ಯಯನವಾಗಿದೆ
ಪರಿಶೋಧನಾತ್ಮಕ ಔಷಧೋಪಚಾರವನ್ನು ಸುಮಾರು 5,500 ಜನರಿಗೆ ನೀಡಲಾಗುತ್ತದೆ. ಸಂಶೋಧಕರು ಅದರ ಪರಿಣಾಮಕಾರಿತ್ವವನ್ನು ದೃಢೀಕರಿಸಲು, ಅಡ್ಡಪರಿಣಾಮಗಳನ್ನು ಮೇಲ್ವಿಚಾರಣೆ ಮಾಡಲು, ಅದನ್ನು ಸಾಮಾನ್ಯವಾಗಿ ಬಳಸುವ ಚಿಕಿತ್ಸೆಗಳೊಂದಿಗೆ ಹೋಲಿಸಲು ಮತ್ತು ಪರಿಶೋಧನಾತ್ಮಕ ಔಷಧೋಪಚಾರ ಅಥವಾ ಚಿಕಿತ್ಸೆಯನ್ನು ಸೂಕ್ತವಾಗಿ ಬಳಸಲು ಅನುವು ಮಾಡಿಕೊಡುವ ಮಾಹಿತಿಯನ್ನು ಸಂಗ್ರಹಿಸಲು ಕೆಲಸ ಮಾಡುತ್ತಿದ್ದಾರೆ.
ಭಾಗವಹಿಸುವುದರ ಅರ್ಥವೇನು?
ಕೆಳಗಿನ ರೇಖಾಚಿತ್ರದ ಪ್ರಕಾರ ಅಧ್ಯಯನವು 3 ಅವಧಿಗಳನ್ನು ಒಳಗೊಂಡಿದೆ: 28 ದಿನಗಳವರೆಗೆ ಸ್ಕ್ರೀನಿಂಗ್ ಅವಧಿ; ಚಿಕಿತ್ಸೆಯ ಅವಧಿ 7 ವರ್ಷಗಳು; ಮತ್ತು ಕೊನೆಯ ವ್ಯಕ್ತಿಯು ಅಧ್ಯಯನಕ್ಕೆ ಸೇರಿದ 10 ವರ್ಷಗಳವರೆಗೆ ನಿಮ್ಮ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಅನುಸರಣಾ ಅವಧಿ. ಇದರರ್ಥ ನೀವು ಈ ಅಧ್ಯಯನದಲ್ಲಿ 10-14 ವರ್ಷಗಳ ನಡುವೆ ಇರಬಹುದು. ನೀವು ಯಾವುದೇ ಸಮಯದಲ್ಲಿ ಅಧ್ಯಯನವನ್ನು ತೊರೆಯಲು ಆಯ್ಕೆ ಮಾಡಬಹುದು.
ಸ್ಕ್ರೀನಿಂಗ್ ಅವಧಿ
ನೀವು ಭಾಗವಹಿಸಲು ಆಯ್ಕೆಮಾಡಿದರೆ, ನೀವು ಅಧ್ಯಯನಕ್ಕೆ ಅರ್ಹರಾಗಿದ್ದೀರಾ ಎಂದು ಖಚಿತಪಡಿಸಿಕೊಳ್ಳಲು, ನಿಮ್ಮ ಅಧ್ಯಯನ ವೈದ್ಯರು ಅಥವಾ ಇತರ ತಜ್ಞರಿಗೆ ಹಲವಾರು ಭೇಟಿಗಳ ಅಗತ್ಯವಿರುವ ಸರಣಿ ಪರೀಕ್ಷೆಗಳಿಗೆ ನೀವು ಒಳಗಾಗುತ್ತೀರಿ. ಇದನ್ನು ಸ್ಕ್ರೀನಿಂಗ್ ಎಂದು ಕರೆಯಲಾಗುತ್ತದೆ ಮತ್ತು ಈ ಪರೀಕ್ಷೆಗಳನ್ನು ಮಾಡಲು ಒಟ್ಟಾರೆ ಸಮಯದ ವಿಂಡೋ 28 ದಿನಗಳವರೆಗೆ ಇರುತ್ತದೆ. ಸಾಧ್ಯವಿರುವಲ್ಲಿ, ಸ್ಕ್ರೀನಿಂಗ್‌ಗೆ ಮುಂಚಿತವಾಗಿ ಲಭ್ಯವಿರುವ ಮೌಲ್ಯಮಾಪನಗಳು ಮತ್ತು ಮಾದರಿಗಳನ್ನು ನಿಮ್ಮ ಅಧ್ಯಯನ ವೈದ್ಯರು ಬಳಸುತ್ತಾರೆ.
ನೀವು ಸ್ಕ್ರೀನಿಂಗ್ ಪ್ರವೇಶ ಮಾನದಂಡಗಳನ್ನು ಪೂರೈಸಿದರೆ, ಅಧ್ಯಯನ ಔಷಧ A ಅನ್ನು ದಿನಕ್ಕೆ ಒಮ್ಮೆ ಮೌಖಿಕವಾಗಿ ತೆಗೆದುಕೊಳ್ಳುವ ಅಥವಾ ದಿನಕ್ಕೆ ಒಮ್ಮೆ ಮೌಖಿಕವಾಗಿ ತೆಗೆದುಕೊಳ್ಳುವ ಪ್ರಮಾಣಿತ ಎಂಡೋಕ್ರೈನ್ ಥೆರಪಿಯನ್ನು (ET) ಸ್ವೀಕರಿಸಲು ನಿಮ್ಮನ್ನು ಯಾದೃಚ್ಛಿಕವಾಗಿ ನಿಯೋಜಿಸಲಾಗುತ್ತದೆ. ಯಾದೃಚ್ಛಿಕವಾಗಿ ನಿಯೋಜಿಸುವುದು ಎಂದರೆ ನೀವು ಪಡೆಯುವ ಯಾವುದೇ ಚಿಕಿತ್ಸೆಯು ಆಕಸ್ಮಿಕವಾಗಿ ಇರುತ್ತದೆ, ಉದಾಹರಣೆಗೆ ನಾಣ್ಯವನ್ನು ಚಿಮ್ಮಿಸುವುದು ಅಥವಾ ಟೋಪಿಯಿಂದ ಹೆಸರುಗಳನ್ನು ತೆಗೆಯುವುದು. ನಿಮಗೆ ಯಾವುದೇ ಚಿಕಿತ್ಸೆಯನ್ನು ನೀಡುವ 2 ರಲ್ಲಿ 1 (50%) ಅವಕಾಶವಿರುತ್ತದೆ. ಅಧ್ಯಯನ ಔಷಧ A ಅಥವಾ ಪ್ರಮಾಣಿತ ET ಜೊತೆಗೆ, ನಿಮ್ಮ ಚಿಕಿತ್ಸೆಯ ಮೊದಲ 2 ವರ್ಷಗಳವರೆಗೆ ಅಧ್ಯಯನ ಔಷಧ B ಎಂಬ ಹೆಚ್ಚುವರಿ ಔಷಧವನ್ನು ಸಹ ನೀವು ಪಡೆಯಬಹುದು.
ಚಿಕಿತ್ಸಾ ಅವಧಿ - 7 ವರ್ಷಗಳವರೆಗೆ
ಅಧ್ಯಯನದ ಚಿಕಿತ್ಸೆಯ ಅವಧಿಯು 7 ವರ್ಷಗಳವರೆಗೆ ಇರುತ್ತದೆ. ಈ ಸಮಯದಲ್ಲಿ, ನೀವು ತಾಣದಲ್ಲಿ ಭೇಟಿಗಳಿಗೆ ಹಾಜರಾಗುತ್ತೀರಿ ಮತ್ತು ದೂರವಾಣಿ ಮೂಲಕ ಸಂಪರ್ಕಿಸಲ್ಪಡುತ್ತೀರಿ.
ನೀವು ಅನುಸರಣಾ ಅವಧಿಯನ್ನು ಪ್ರಾರಂಭಿಸುವ ಮೊದಲು, ನಿಮಗೆ ಎರಡು ಅಂತಿಮ ಭೇಟಿಗಳು ಇರುತ್ತವೆ, ಚಿಕಿತ್ಸೆಯ ಅಂತ್ಯದ ಭೇಟಿ ಮತ್ತು ಸುರಕ್ಷತಾ ಅನುಸರಣಾ ಭೇಟಿ. ಚಿಕಿತ್ಸೆಯ ಅಂತ್ಯದ ಭೇಟಿಯು ನೀವು ಅಧ್ಯಯನ ಚಿಕಿತ್ಸೆಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವ ಸ್ಥಳವಾಗಿದೆ ಮತ್ತು ನಿಮ್ಮ ಚಿಕಿತ್ಸೆಯ ಅಂತ್ಯದ ಭೇಟಿಯ ಸುಮಾರು 1 ತಿಂಗಳ ನಂತರ ಸುರಕ್ಷತಾ ಅನುಸರಣಾ ಭೇಟಿಯನ್ನು ನಡೆಸಲಾಗುತ್ತದೆ.
ಅನುಸರಣಾ ಅವಧಿ - ವರ್ಷಕ್ಕೊಮ್ಮೆ
ಅನುಸರಣಾ ಅವಧಿಯಲ್ಲಿ, ನಿಮ್ಮ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ನಿಮ್ಮನ್ನು ಪ್ರತಿ ವರ್ಷ ಅನುಸರಣೆ ಮಾಡುವುದನ್ನು ಮುಂದುವರಿಸಲಾಗುತ್ತದೆ ಮತ್ತು ವರ್ಷಕ್ಕೊಮ್ಮೆ ಭೇಟಿಗೆ ಹಾಜರಾಗುತ್ತೀರಿ. ಈ ಅನುಸರಣಾ ಭೇಟಿಗಳು ದೂರವಾಣಿ/ವೀಡಿಯೊ ಅಥವಾ ಆನ್‌ಸೈಟ್ ಮೂಲಕ ಸಂಭವಿಸಬಹುದು ಮತ್ತು ಕೊನೆಯ ವ್ಯಕ್ತಿಯು ಅಧ್ಯಯನಕ್ಕೆ ಸೇರಿದ 10 ವರ್ಷಗಳವರೆಗೆ ಮುಂದುವರಿಯುತ್ತದೆ.
ಸಂಭಾವ್ಯ ಪ್ರಯೋಜನಗಳು ಮತ್ತು ಅಪಾಯಗಳು ಯಾವುವು?
CAMBRIA-2 ಅಧ್ಯಯನದಲ್ಲಿ ಭಾಗವಹಿಸುವುದರಿಂದ ಯಾವುದೇ ಖಾತರಿಯ ಪ್ರಯೋಜನವಿಲ್ಲ. ಆದರೂ, ಆರಂಭಿಕ ER+/HER2- ಸ್ತನ ಕ್ಯಾನ್ಸರ್ ಹೊಂದಿರುವ ರೋಗಿಗಳಿಗೆ ಪರಿಶೋಧನಾತ್ಮಕ ಔಷಧೋಪಚಾರವನ್ನು ಸಹಿಸಿಕೊಳ್ಳಬಹುದೇ ಮತ್ತು ಪರಿಣಾಮಕಾರಿಯಾಗಿರಬಹುದೇ ಎಂದು ನಿರ್ಧರಿಸಲು ನಿಮ್ಮ ಭಾಗವಹಿಸುವಿಕೆಯು ಸಹಾಯ ಮಾಡುತ್ತದೆ ಮತ್ತು ಭವಿಷ್ಯದ ರೋಗಿಗಳಿಗೆ ಪರ್ಯಾಯ ಚಿಕಿತ್ಸೆಯ ಆಯ್ಕೆಯನ್ನು ತಲುಪಿಸಲು ಸಹಾಯ ಮಾಡಬಹುದು.
FAQs
ಚಿಕಿತ್ಸಾತ್ಮಕ ಅಧ್ಯಯನ ಎಂದರೇನು?
ಚಿಕಿತ್ಸಾತ್ಮಕ ಅಧ್ಯಯನಗಳು ಔಷಧ, ಚಿಕಿತ್ಸೆ, ಅಥವಾ ಸಾಧನವನ್ನು ಸಹಿಸಿಕೊಳ್ಳಬಹುದೇ ಮತ್ತು ಮಾನವರಿಗೆ ಪರಿಣಾಮಕಾರಿಯೇ ಎಂದು ಮೌಲ್ಯಮಾಪನ ಮಾಡುತ್ತವೆ. ಚಿಕಿತ್ಸಾತ್ಮಕ ಅಧ್ಯಯನಗಳು ವೈಜ್ಞಾನಿಕ ಅಧ್ಯಯನಗಳಾಗಿವೆ, ಇದರಲ್ಲಿ ಪರಿಶೋಧನಾತ್ಮಕ ಔಷಧಿಗಳು ಮತ್ತು ಚಿಕಿತ್ಸೆಗಳನ್ನು ಸಹಿಸಿಕೊಳ್ಳಬಹುದು ಮತ್ತು ಅಗತ್ಯವಿರುವ ಜನರಿಗೆ ಪರಿಣಾಮಕಾರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಲು ನಿಯಂತ್ರಿತ ರೀತಿಯಲ್ಲಿ ಪರೀಕ್ಷಿಸಲಾಗುತ್ತದೆ. ರೋಗಿಗಳಿಗೆ ಸಂಭಾವ್ಯ ಔಷಧೋಪಚಾರಗಳನ್ನು ತರುವಲ್ಲಿ ಅವು ಪ್ರಮುಖ ಹಂತಗಳಲ್ಲಿ ಒಂದಾಗಿದೆ.
ಚಿಕಿತ್ಸಾತ್ಮಕ ಸಂಶೋಧನೆ ಏಕೆ ಮುಖ್ಯ?
ಚಿಕಿತ್ಸಾತ್ಮಕ ಸಂಶೋಧನೆಯು ವೈದ್ಯಕೀಯ ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ಜನರಿಗೆ ಸಂಭಾವ್ಯ ಔಷಧೋಪಚಾರಗಳನ್ನು ತರಲು ಸಹಾಯ ಮಾಡುತ್ತದೆ. ಸಂಭಾವ್ಯ ಔಷಧೋಪಚಾರಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಅವುಗಳನ್ನು ಚಿಕಿತ್ಸಾತ್ಮಕ ಅಧ್ಯಯನಗಳಲ್ಲಿ ಅಧ್ಯಯನ ಮಾಡಬೇಕಾಗಿದೆ. ಚಿಕಿತ್ಸಾತ್ಮಕ ಅಧ್ಯಯನಗಳು ಯಶಸ್ವಿಯಾಗಲು ಸ್ವಯಂಸೇವಕರ ಭಾಗವಹಿಸುವಿಕೆಯನ್ನು ಅವಲಂಬಿಸಿವೆ. ಪರಿಶೋಧನಾತ್ಮಕ ಔಷಧೋಪಚಾರವು ಸಾರ್ವಜನಿಕರನ್ನು ತಲುಪಲು ಸರಾಸರಿ 8 ವರ್ಷಗಳವರೆಗೆ ತೆಗೆದುಕೊಳ್ಳಬಹುದು. ಎಲ್ಲಾ ಪರಿಶೋಧನಾತ್ಮಕ ವೈದ್ಯಕೀಯ ಚಿಕಿತ್ಸೆಗಳು ಮತ್ತು ಔಷಧೋಪಚಾರಗಳು ಸಹಿಸಿಕೊಳ್ಳಬಲ್ಲವು ಮತ್ತು ಪರಿಣಾಮಕಾರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಚಿಕಿತ್ಸಾತ್ಮಕ ಅಧ್ಯಯನಗಳ ಮೂಲಕ ನೋಡುತ್ತಾರೆ.
ಚಿಕಿತ್ಸಾತ್ಮಕ ಅಧ್ಯಯನವನ್ನು ಯಾರು ನಡೆಸುತ್ತಾರೆ?
ಚಿಕಿತ್ಸಾತ್ಮಕ ಅಧ್ಯಯನವನ್ನು ಸಾಮಾನ್ಯವಾಗಿ ಜಾಗತಿಕ ತಂಡವು ನಡೆಸುತ್ತದೆ ಮತ್ತು ಔಷಧೀಯ ಕಂಪನಿಗಳು, ಶೈಕ್ಷಣಿಕ ವೈದ್ಯಕೀಯ ಕೇಂದ್ರಗಳು, ಸ್ವಯಂಸೇವಕ ಗುಂಪುಗಳು ಅಥವಾ ಆರೋಗ್ಯ ಆರೈಕೆ ಪೂರೈಕೆದಾರರು ಪ್ರಾಯೋಜಿಸಬಹುದು ಅಥವಾ ಧನಸಹಾಯ ನೀಡಬಹುದು. ಈ ಚಿಕಿತ್ಸಾತ್ಮಕ ಅಧ್ಯಯನದ ನೇತೃತ್ವವನ್ನು ವೈದ್ಯಕೀಯ ವೈದ್ಯರಾಗಿರುವ ಪ್ರಧಾನ ಪರಿಶೋಧಕರು ವಹಿಸುತ್ತಾರೆ. ಸಂಶೋಧನಾ ತಂಡವು ವೈದ್ಯರು, ದಾದಿಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಇತರ ಆರೋಗ್ಯ ಆರೈಕೆ ವೃತ್ತಿಪರರನ್ನು ಒಳಗೊಂಡಿರಬಹುದು.
ಚಿಕಿತ್ಸಾತ್ಮಕ ಸಂಶೋಧನೆಯ ಹಂತಗಳು ಯಾವುವು?
ಹಂತ I
ಇವು ಕಡಿಮೆ ಸಂಖ್ಯೆಯ ಭಾಗವಹಿಸುವವರನ್ನು ಹೊಂದಿರುವ ಮಾನವರಲ್ಲಿನ ಅಧ್ಯಯನಗಳಾಗಿವೆ. ಪರಿಶೋಧನೆಯ ಮುಖ್ಯ ಉದ್ದೇಶಗಳು:
- ಅಧ್ಯಯನ ಔಷಧೋಪಚಾರದ ಸುರಕ್ಷತಾ ಪ್ರೊಫೈಲ್
- ಅಧ್ಯಯನ ಔಷಧೋಪಚಾರವನ್ನು ದೇಹವು ಹೇಗೆ ಹೀರಿಕೊಳ್ಳುತ್ತದೆ ಮತ್ತು ಯಾವ ಡೋಸೇಜ್ ಅನ್ನು ಬಳಸಬೇಕು
- ಅಧ್ಯಯನ ಔಷಧೋಪಚಾರವನ್ನು ದೇಹದಿಂದ ಹೇಗೆ ತೆಗೆದುಹಾಕಲಾಗುತ್ತದೆ
- ಸಂಭಾವ್ಯ ಅಡ್ಡ ಪರಿಣಾಮಗಳು
ಹಂತ II
ಸುಮಾರು 100-300 ಭಾಗವಹಿಸುವವರೊಂದಿಗೆ ಸಣ್ಣ ಅಧ್ಯಯನಗಳು. ಪರಿಶೋಧನೆಯ ಮುಖ್ಯ ಉದ್ದೇಶಗಳು:
- ಅಧ್ಯಯನ ಔಷಧೋಪಚಾರದ ಸುರಕ್ಷತಾ ಪ್ರೊಫೈಲ್
- ಅಧ್ಯಯನ ಔಷದೋಪಚಾರವು ಒಂದು ನಿರ್ದಿಷ್ಟ ಕಾಯಿಲೆಗೆ ಕೆಲಸ ಮಾಡುತ್ತದೆಯೇ
- ಅಧ್ಯಯನ ಔಷಧೋಪಚಾರದ ಅತ್ಯುತ್ತಮ ಸಂಭಾವ್ಯ ಡೋಸ್
ಹಂತ III
ಸುಮಾರು 500 ಅಥವಾ ಹೆಚ್ಚಿನ ಭಾಗವಹಿಸುವವರನ್ನು ಹೊಂದಿರುವ ದೊಡ್ಡ ಅಧ್ಯಯನಗಳು. ಆರೋಗ್ಯ ಪ್ರಾಧಿಕಾರಗಳ ಅಂತಿಮ ಅನುಮೋದನೆಗಾಗಿ ಇವು ಮುಖ್ಯ ಅಧ್ಯಯನಗಳಾಗಿವೆ. ಪರಿಶೋಧನೆಯ ಮುಖ್ಯ ಉದ್ದೇಶಗಳು:
- ದೊಡ್ಡ ಜನಸಂಖ್ಯೆಯಲ್ಲಿ ಸುರಕ್ಷತಾ ಪ್ರೊಫೈಲ್ ಮತ್ತು ಅಡ್ಡಪರಿಣಾಮಗಳು
- ಅಧ್ಯಯನ ಔಷದೋಪಚಾರವು ಒಂದು ನಿರ್ದಿಷ್ಟ ಕಾಯಿಲೆಗೆ ಕೆಲಸ ಮಾಡುತ್ತದೆಯೇ
- ಚಿಕಿತ್ಸೆಯು ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಮಾಣಿತ ಚಿಕಿತ್ಸೆಗಳಿಗೆ ಹೇಗೆ ಹೋಲಿಕೆಯಾಗುತ್ತದೆ
ಹಂತ IV
ಅಧ್ಯಯನ ಔಷಧೋಪಚಾರದ ನಂತರ ರೋಗಿಗಳಲ್ಲಿನ ದೊಡ್ಡ ಅಧ್ಯಯನಗಳನ್ನು ಪ್ರಿಸ್ಕ್ರಿಪ್ಷನ್ ಬಳಕೆಗಾಗಿ ನಿಯಂತ್ರಕ ಪ್ರಾಧಿಕಾರಗಳು ಅನುಮೋದಿಸಿವೆ. ಪರಿಶೋಧನೆಯ ಮುಖ್ಯ ಉದ್ದೇಶಗಳು:
- ಜನಸಂಖ್ಯೆಯಲ್ಲಿ ದೈನಂದಿನ ಬಳಕೆಯ ಸಮಯದಲ್ಲಿ ಅಡ್ಡ ಪರಿಣಾಮಗಳು
- ದೀರ್ಘಾವಧಿಯಲ್ಲಿ ಅಪಾಯಗಳು ಮತ್ತು ಪ್ರಯೋಜನಗಳು
ಭಾಗವಹಿಸುವುದರ ಅರ್ಥವೇನು?
ಅಧ್ಯಯನದಲ್ಲಿ ಭಾಗವಹಿಸುವ ಮೊದಲು, ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಲು ಮಾಹಿತಿಯುಕ್ತ ಸಮ್ಮತಿ ದಸ್ತಾವೇಜನ್ನು ಓದಿ ಸಹಿ ಮಾಡುವಂತೆ ನಿಮ್ಮನ್ನು ಕೇಳಲಾಗುತ್ತದೆ:
- ಎಲ್ಲಾ ಅಧ್ಯಯನ ಕಾರ್ಯವಿಧಾನಗಳು, ಅಪಾಯಗಳು ಮತ್ತು ಅಧ್ಯಯನ ಔಷಧೋಪಚಾರದ ಸಂಭಾವ್ಯ ಅಡ್ಡ ಪರಿಣಾಮಗಳು ಸೇರಿದಂತೆ ಅಧ್ಯಯನವನ್ನು ನೀವು ಅರ್ಥಮಾಡಿಕೊಂಡಿದ್ದೀರಿ.
- ನೀವು ಸ್ವಯಂಸೇವಕರಾಗಲು ಒಪ್ಪುತ್ತೀರಿ.
- ಯಾವುದೇ ಕಾರಣಕ್ಕಾಗಿ ನೀವು ಯಾವುದೇ ಸಮಯದಲ್ಲಿ ಅಧ್ಯಯನವನ್ನು ಬಿಡಬಹುದು ಎಂದು ನೀವು ಅರ್ಥಮಾಡಿಕೊಂಡಿದ್ದೀರಿ.
ಸಮ್ಮತಿ ನೀಡುವ ಪ್ರಕ್ರಿಯೆಯ ಸಮಯದಲ್ಲಿ, ನೀವು ಹೊಂದಿರಬಹುದಾದ ಯಾವುದೇ ಪ್ರಶ್ನೆಗಳನ್ನು ತಾಣದ ಸಿಬ್ಬಂದಿಗೆ ಕೇಳಲು ನಿಮಗೆ ಅವಕಾಶವಿರುತ್ತದೆ. ಚಿಕಿತ್ಸಾತ್ಮಕ ಅಧ್ಯಯನದಲ್ಲಿ ಭಾಗವಹಿಸುವುದು ಸಾಮಾನ್ಯವಾಗಿ ನೀವು ಅಧ್ಯಯನಕ್ಕೆ ಅರ್ಹರೇ ಎಂದು ನಿರ್ಧರಿಸಲು ಪರೀಕ್ಷೆಗಳನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ. ನೀವು ಅರ್ಹತೆ ಪಡೆದರೆ, ಪರಿಶೋಧನಾತ್ಮಕ ಔಷಧೋಪಚಾರವನ್ನು ಸ್ವೀಕರಿಸಲು, ಪರೀಕ್ಷೆಗಳು ಅಥವಾ ಕಾರ್ಯವಿಧಾನಗಳಿಗೆ ಒಳಗಾಗಲು ಮತ್ತು ನಿಮ್ಮ ರೋಗವನ್ನು ನಿರ್ಣಯಿಸಲು ನೀವು ನಿಯಮಿತವಾಗಿ ಚಿಕಿತ್ಸಾಲಯಕ್ಕೆ ಭೇಟಿ ನೀಡುತ್ತೀರಿ. ಅಧ್ಯಯನ ಸಿಬ್ಬಂದಿ ನಿಮ್ಮ ಪ್ರಗತಿ ಮತ್ತು ಯೋಗಕ್ಷೇಮವನ್ನು ಮೇಲ್ವಿಚಾರಣೆ ಮಾಡುತ್ತಾರೆ.